ಉದ್ದಿನಬೇಳೆ ಮಸಾಲ / Urid Dal Masala




ಬೇಕಾಗುವ ಸಾಮಗ್ರಿಗಳು

1 ಕಪ್ ಉದ್ದಿನಬೇಳೆ (1 ಘಂಟೆ ನೆನೆಸಿ ಚನ್ನಾಗಿ ತೊಳೆದುಕೊಳ್ಳಬೇಕು)
2 ಈರುಳ್ಳೀ
1 ಟೊಮ್ಯಾಟೊ
1 ಇಂಚು ಶುಂಠಿ
4-5 ಬೆಳ್ಳುಳ್ಳಿ ಹಿಲ್ಕು
2 ಹಸಿ ಮೆಣಸಿನಕಾಯಿ
1 ಟೀಸ್ಪೂನ್ ಕಾರದ ಪುಡಿ
1 ಟೀಸ್ಪೂನ್ ಗರಮ್ ಮಸಾಲೆ / ಚೋಲೆ ಮಸಾಲೆ
2 ಟೀಸ್ಪೂನ್ ಅರಿಸಿನದಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಬೆಲ್ಲ

ಮಾಡುವ ವಿಧಾನ

ಮೊದಲು ಒಂದು ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ತೊಳೆದ ಉದ್ದಿನಬೇಳೆ ಮತ್ತೆ ಅರಿಸಿನದಪುಡಿ ಹಾಕಿ ಸ್ವಲ್ಪ ಫ್ರೈ ಮಾಡ್ಕೊಬೇಕು, ಅದು ಸ್ವಲ್ಪ ಫ್ರೈ ಅದಮೇಲೆ ಅದಕ್ಕೆ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಬೇಕು .ಉದ್ದಿನಬೇಳೆ ಬೇಯೋ ಹೊತ್ತಿಗೆ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಹೆಚ್ಚಿದ ಈರುಳ್ಳೀ,ಬೆಳ್ಳುಳ್ಳಿ,ಹಸಿ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಶುಂಠಿ ಹಾಕಿ ಹೊಂಬಣ್ಣ ಬರುವತನಕ ಹುರಿಬೇಕು ನಂತರ ಅದಕ್ಕೆ ಟೊಮ್ಯಾಟೊ ಮತ್ತೆ ಮಿಕ್ಕ ಮಸಾಲೆ ಹಾಕಿ ಸ್ವಲ್ಪ ಹೊತ್ತು ಫ್ರೈ ಮಡಿ ಇವಾಗ ಮಸಾಲೆ ರೆಡಿ ಆಗಿದೆ, ರೆಡಿ ಆಗಿರೋ ಮಸಾಲೆಗೆ ಬೆಂದ ಉದ್ದಿನಬೇಳೆ ಹಾಕಿದರೆ ಉದ್ದಿನಬೇಳೆ ಮಸಾಲ ರೆಡಿ.

ಹುಳಿಪುಡಿ / Sambar Masala Powder

ಬೇಕಾಗುವ ಸಾಮಗ್ರಿಗಳು

¼ ಕೇಜಿ ಕೊತ್ತಂಬರಿಬೀಜ
¼ ಕೇಜಿ ಬ್ಯಾಡಗಿಮೆಣಸಿನಕಾಯಿ
25 ಗ್ರಾಂ ಜೀರಿಗೆ
1 ಜಾಯಿಕಾಯಿ
25-50 ಗ್ರಾಂ ಚಕ್ಕೆ
6 ಏಲಕ್ಕಿ
200 ಗ್ರಾಂ ಕಡಲೆಬೇಳೆ
50 ಗ್ರಾಂ ಉದ್ದಿನಬೇಳೆ
ಸ್ವಲ್ಪ ಇಂಗು
ಮೆಂತ್ಯ 1 ಟೀಸ್ಪೂನ್

ಮಾಡುವ ವಿಧಾನ

ಮೇಲೆ ಹೇಳಿರುವ ಸಾಮಾನುಗಳನ್ನು ಒಂದೊಂದಾಗಿ ಹುರಿದು ಅದನ್ನು ಚನ್ನಾಗಿ ಪುಡಿ ಮಾಡಿದರೆ ಹುಳಿಪುಡಿ ರೆಡಿ.

ಸಾರಿನ ಪುಡಿ / Rasam Masala Powder

ಬೇಕಾಗುವ ಸಾಮಗ್ರಿಗಳು

¼ ಕೇಜಿ ಕೊತ್ತಂಬರಿಬೀಜ
¼ ಕೇಜಿ ಬ್ಯಾಡಗಿಮೆಣಸಿನಕಾಯಿ
1೦೦ ಗ್ರಾಂ ಜೀರಿಗೆ
25 ಗ್ರಾಂ ಸಾಸಿವೆ
12 ಗ್ರಾಂ ಕಾಳುಮೆಣಸು
ಸ್ವಲ್ಪ ಇಂಗು
ಮೆಂತ್ಯ ಸ್ವಲ್ಪ

ಮಾಡುವ ವಿಧಾನ
ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಹದವಾಗಿ ಹುರಿದು ಚೆನ್ನಾಗಿ ಪುಡಿ ಮಾಡಿದರೆ ಸಾರಿನ ಪುಡಿ ರೆಡಿ

ಜೀರಿಗೆ ತಂಬ್ಳಿ / Jeera Tambuli / Jeera Raita


ಬೇಕಾಗುವ ಸಾಮಗ್ರಿಗಳು
2 ಟೀ ಸ್ಪೂನ್ ಜೀರಿಗೆ
ಅರ್ದ ಕಪ್ ತೆಂಗಿನತುರಿ
4-8 ಕಾಳು ಮೆಣಸು
ಮೊಸರು
ರುಚಿಗೆ ತಕ್ಕಸ್ಟು ಉಪ್ಪು
ಸ್ವಲ್ಪ ಬೆಲ್ಲ
ಒಗ್ಗರಣೆಗೆ :- ತುಪ್ಪ,ಸಾಸಿವೆ,ಇಂಗು ಮತ್ತು ಉದ್ದಿನಬೇಳೆ
ಮಾಡುವ ವಿಧಾನ
ಮೇಲೆ ಹೇಳಿರುವ ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ರುಬ್ಬಿಕೊಂಡು ( ಮೊಸರು,ಮತ್ತು ಒಗ್ಗರಣೆ ಸಾಮಗ್ರಿಬಿಟ್ಟು) ಮೊಸರಿಗೆ ಸೇರಿಸಿ ಒಗ್ಗರಣೆ ಹಾಕಿದರೆ ಜೀರಿಗೆ ತಂಬ್ಳಿ ರೆಡಿ.