Showing posts with label Curries. Show all posts
Showing posts with label Curries. Show all posts

ಉದ್ದಿನಬೇಳೆ ಮಸಾಲ / Urid Dal Masala




ಬೇಕಾಗುವ ಸಾಮಗ್ರಿಗಳು

1 ಕಪ್ ಉದ್ದಿನಬೇಳೆ (1 ಘಂಟೆ ನೆನೆಸಿ ಚನ್ನಾಗಿ ತೊಳೆದುಕೊಳ್ಳಬೇಕು)
2 ಈರುಳ್ಳೀ
1 ಟೊಮ್ಯಾಟೊ
1 ಇಂಚು ಶುಂಠಿ
4-5 ಬೆಳ್ಳುಳ್ಳಿ ಹಿಲ್ಕು
2 ಹಸಿ ಮೆಣಸಿನಕಾಯಿ
1 ಟೀಸ್ಪೂನ್ ಕಾರದ ಪುಡಿ
1 ಟೀಸ್ಪೂನ್ ಗರಮ್ ಮಸಾಲೆ / ಚೋಲೆ ಮಸಾಲೆ
2 ಟೀಸ್ಪೂನ್ ಅರಿಸಿನದಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಬೆಲ್ಲ

ಮಾಡುವ ವಿಧಾನ

ಮೊದಲು ಒಂದು ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ತೊಳೆದ ಉದ್ದಿನಬೇಳೆ ಮತ್ತೆ ಅರಿಸಿನದಪುಡಿ ಹಾಕಿ ಸ್ವಲ್ಪ ಫ್ರೈ ಮಾಡ್ಕೊಬೇಕು, ಅದು ಸ್ವಲ್ಪ ಫ್ರೈ ಅದಮೇಲೆ ಅದಕ್ಕೆ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಬೇಕು .ಉದ್ದಿನಬೇಳೆ ಬೇಯೋ ಹೊತ್ತಿಗೆ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಹೆಚ್ಚಿದ ಈರುಳ್ಳೀ,ಬೆಳ್ಳುಳ್ಳಿ,ಹಸಿ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಶುಂಠಿ ಹಾಕಿ ಹೊಂಬಣ್ಣ ಬರುವತನಕ ಹುರಿಬೇಕು ನಂತರ ಅದಕ್ಕೆ ಟೊಮ್ಯಾಟೊ ಮತ್ತೆ ಮಿಕ್ಕ ಮಸಾಲೆ ಹಾಕಿ ಸ್ವಲ್ಪ ಹೊತ್ತು ಫ್ರೈ ಮಡಿ ಇವಾಗ ಮಸಾಲೆ ರೆಡಿ ಆಗಿದೆ, ರೆಡಿ ಆಗಿರೋ ಮಸಾಲೆಗೆ ಬೆಂದ ಉದ್ದಿನಬೇಳೆ ಹಾಕಿದರೆ ಉದ್ದಿನಬೇಳೆ ಮಸಾಲ ರೆಡಿ.

ರಾಜ್ಮ ಮಸಾಲ / Rajma Masala

ಬೇಕಾಗಿರುವ ಸಾಮಾನುಗಳು
100 gm ರಾಜ್ಮ ಕಾಳು
1 ಕಪ್ ಟೊಮ್ಯಾಟೊ ಪ್ಯೂರಿ
1 ಈರುಳ್ಳಿ
1 TS ಶುಂಟಿ ಬೆಳ್ಳುಳ್ಳಿ ಪೇಸ್ಟ್
1 TS ಕಾರದ ಪುಡಿ,
1 TS ಗರಮ್ ಮಸಾಲೆ
1 TS ರಾಜ್ಮ ಮಸಾಲೆ
5-6 TS ಎಣ್ಣೆ
1 TS ಜೀರಿಗೆ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
ರಾಜ್ಮ ಸಾಮಾನ್ಯಕ್ಕೆ ಬೇಯದ ಕಾರಣ, ಅದನ್ನು ಕನಿಷ್ಟ ಅಂದರು 12 ಗಂಟೆ ನೆನಸಿಟ್ಟುಕೊಳ್ಳಬೇಕು. ಹೀಗೆ ನೆನಸಿದ ಕಾಳುಗಳನ್ನು cookerನಲ್ಲಿ ಚನ್ನಾಗಿ ಬೇಯಿಸಿಕೊಳ್ಳಬೇಕು. ಇವಾಗ ಬಾಣಲೆಯಲ್ಲಿ, ಎಣ್ಣೆಯನ್ನು ಹಾಕಿ, ಜೀರಿಗೆ ಒಗ್ಗರಣೆ ಮಾಡಿಕೊಳ್ಳಿ. ಅದಕ್ಕೆ ಹೆಚ್ಚಿದ ಈರುಳ್ಳೀ ಹಾಕಿ fry ಮಾಡ್ಕೊಳಿ. ಅದು golden brown ಆದಮೇಲೆ ಉಪ್ಪು, ಕಾರದ ಪುಡಿ, ಶುಂಟಿ ಬೆಳ್ಳುಳ್ಳಿ ಪೇಸ್ಟ್, ರಾಜ್ಮ ಮಸಾಲೆ, ಟೊಮ್ಯಾಟೊ ಪ್ಯೂರಿ, ಗರಮ್ ಮಸಾಲೆ ಹಾಕಿ ಸ್ವಲ್ಪ ಕುದಿಸಿಕೊಳ್ಳಿ. ನಂತರ ಬೇಯಿಸಿರುವ ರಾಜ್ಮ ಕಾಳುಗಳನ್ನು ಹಾಕಿ ಚೆನ್ನಾಗಿ ಕುದಿಸಿ. (ಜಾಸ್ತಿ ಮಸಾಲೆ ತಿನ್ನಲೊಲ್ಲವರು, ಬೇಕಾದ್ರೆ ಸ್ವಲ್ಪ ಕಮ್ಮಿನೆ ಹಕ್ಕೊಂಡ್ರುನು ನಡಿಯತ್ತೆ).

In English
Ingredients
  • 100 gms rajma (soaked for 12 hours)
  • 1 cup Tomato puree
  • 1 onion
  • 1tsp ginger garlic paste
  • 1tsp red chillli powder
  • 1tsp garam masala
  • 5-6 tsp sunflower oil
  • 1tsp cumin seeds
  • Salt to taste

Method
  • Cook rajma in a pressure cooker for about 20 minutes.
  • Heat oil in a pan add cumin seeds and allow them to splatter.
  • Add onion and sauté till it gets nice and brown, now add ginger garlic paste, red chilli powder, garam masala powder and sauté for about 20 seconds
  • Now add tomato puree and salt, cover the pan and cook at a medium heat for about 2 to 3 minutes.
  • Then add cooked Rajma and stir. Add salt if required. Now, cook at a lower heat for approximately 15 minutes.
  • Add water to adjust the consistency of gravy.

ಆಲು ಗೋಬಿ /Aloo Gobhi


ಏನ್ ಏನ್ ಬೇಕು?
1. ಅಲೂ ಗಡ್ಡೆ
2. ಹೂ ಕೋಸು (gobhi)
3. ರುಚಿಗೆ ಉಪ್ಪು
4. Garam Masala
5. Red Chilli powder
6. ಅರ್ಶಿನದ ಪುಡಿ
7. ಜೀರ್ಗೆ

ಹೆಂಗ್ ಮಾಡೋದು?
ಅಲೂ ಗಡ್ದೆನ ತೊಳ್ದು ಹೆಚ್ಕೊಬೇಕು. Small cubes ಆಗೋ ಅಷ್ಟು. ಹಾಗೆ, ಹೂ ಕೊಸನ್ನು ಸಣ್ಣ ಸಣ್ಣ florets ಆಗಿ bidsittkondu, ಬಿಸಿ ನೀರಲ್ಲಿ ಒಂದ್ ಐದ ನಿಮಿಷ ಇಡಬೇಕು (so that ಏನ್ ಏನ್ ಹುಳ ಇದ್ಯೋ ಅದ್ ಹೋಗತ್ತೆ ಅಂತ ಅಷ್ಟೆ, ಗೋಭಿ ಚೆನ್ನಾಗಿದ್ದರೆ ಇದೇನ್ ಮಾಡೋಕ್ ಬೇಕಿಲ್ಲ). ಒಂದು non stick paatre ಲಿ ಒಗ್ಗರಣೆಗೆ ಬೇಕಾಗೋ ಅಷ್ಟು ಎಣ್ಣೆ ತೊಗೊಂಡು ಅದಿಕ್ಕೆ ಸ್ವಲ್ಪ ಸಾಸ್ವೆ ಕಾಳೂ and ಜೀರಿಗೆನ ಹಾಕ್ಬೇಕು. ಜೀರ್ಗೆ ಎಲ್ಲ splutter ಆದ್ಮೇಲೆ, ಹೆಚ್ಚಿರೋ ಅಲೂ ಗಡ್ಡೆ and ಗೋಭಿ ನ ಹಾಕ್ಬೇಕು ಆ ಪತ್ರೆಗೆನೆ. ಬೇಕಾಗೋ ಅಷ್ಟು ಉಪ್ಪು, garam masala powder, red chilli powder and turmeric powderna ಹಾಕಿ, ಸ್ವಲ್ಪ ಹೊತ್ತು fry ಮಾಡಿ. ಅಲೂ ಗಡ್ಡೆ and ಗೊಭಿಗೆ ಹಾಕಿದ್ದ ಮಸಾಲ ಹತ್ತಿದೆ ಅನ್ತಾದ್ಮೇಲೆ close the lid. ಈ mixturena sim ಅಲ್ಲಿ steam ಮಾಡಿ. ಅವಾಗವಾಗ ತೆಗ್ದ್ ನೋಡ್ತಿರಿ. ಅಲೂ ಗಡ್ಡೆ ಅಂಡ್ ಗೋಭಿ bendadmele ಬೇರೆ ಪಾತ್ರೆಗೆ ತೆಗೆದುಕೊಂಡು ಬೇಕಾದರೆ garnish ಮಾಡ್ಬೋದು with Corainder leaves. ಬಿಸಿ ಬಿಸಿ ಅಲೂ-ಗೋಭಿ ready. ಇದು generally chapati ಜೊತೆ ಬಹಳ ಒಪ್ಪತ್ತೆ.

ಟಕಾ ಟಕ್ ಅಂತ ಮಾಡೋ Tangy ಆಲು :) / Tangy Aloo


ಬೇಕಾಗುವ ಸಾಮಾನುಗಳು

1 ದೊಡ್ಡ ಆಲೂಗಡ್ಡೆ(ಬೇಬಿ ಆಲೂ ಆದರೆ 7-8)
50 gms ಹುಣಸೆಹಣ್ಣು
100 gms ಬೆಲ್ಲ
3 tea spoon ಸಾರಿನ ಪುಡಿ
1/4 tea spoon ಅಚ್ಚಕಾರದ ಪುಡಿ
ರುಚಿಗೆ ತಕ್ಕಷ್ತು ಉಪ್ಪು
ಎಣ್ಣೆ,ಸಾಸಿವೆ,2 ಒಣ ಮೆಣಸಿನಕಾಯಿ ಒಗ್ಗರಣೆಗೆ


ಮಾಡುವ ವಿದಾನ

ಮೊದಲು ಆಲೂಗಡ್ಡೆ ಹೆಚ್ಚಿಕೊಂಡು ಅದನ್ನು ಬೇಯಿಸಿಕೊಳ್ಳಿ.(ಬೇಬಿ ಆಲೂ ಆದರೆ ಬರಿ ಸಿಪ್ಪೆ ತೆಗೆದು ಬೇಯಿಸಿದರೆ ಸಾಕು)
ನಂತರ ಒಂದು ದಪ್ಪ ತಳದ ಪಾತ್ರೆಯಲ್ಲಿ ಒಗ್ಗರಣೆ ಹಕಿ ಬೇಇಸಿದ ಆಲೂಗಡ್ಡೆಯನ್ನು ಸ್ವಲ್ಪ ಹೊತ್ತು fry ಮಾಡಿ ಅದಕ್ಕೆಹುಣಸೇರಸ, ಸಾರಿನ ಪುಡಿ,ಉಪ್ಪು, ಅಚ್ಚಕಾರದ ಪುಡಿ, ಬೆಲ್ಲ ಏಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿದರೆ Tangy Aloo ರೆಡಿ :)

ಟೊಮ್ಯಾಟೊ ಸಾಸಿವೆ / Tomato Masala Raita


ಸಕ್ಕತ್ ಅರಾಮಾಗಿ ಮಾಡೋ ಅಂತ ಒಂದು ಚಿಕ್ಕ ಡಿಶ್ ಇದು.

ಇದಕ್ಕೆಬೇಕಾಗುವ ಸಾಮಾನುಗಳು:
1 ದೊಡ್ಡ ಟೊಮ್ಯಾಟೊ
1/2 tea spoon ಸಾಸಿವೆ ಕಾಳು
2-3 ಹಸಿ ಮೆಣಸಿನ ಕಾಯಿ
1/2 ಕಪ್ ತೆಂಗಿನ ಕಾಯಿ ತುರಿ
1/2 ಕಪ್ ಮೊಸರು (optional)
ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ ( ಇಷ್ಟ ಅಗೋದಾದ್ರೆ ತುಪ್ಪ), ಸಾಸಿವೆ, ಜೀರಿಗೆ ಒಗ್ಗರಣೆಗೆ
ಮಾಡುವ ವಿಧಾನ:
ಟೊಮ್ಯಾಟೊ, ಸಾಸಿವೆ ಕಾಳು, ಹಸಿ ಮೆಣಸಿನ ಕಾಯಿ, ಬೆಲ್ಲ, ಉಪ್ಪು ಮತ್ತು ತೆಂಗಿನ ಕಾಯಿ ತುರಿ ಎಲ್ಲವನ್ನು mixerಗೆ ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ಒಗ್ಗರಣೆ ಹಾಕಿ. ಇದಕ್ಕೆ ಮೊಸರನ್ನು ಹಾಕಿದರೆ, ಟೊಮ್ಯಾಟೊ ಸಾಸಿವೆ ರೆಡಿ. (ಮೊಸರು ತಿನ್ನಲು ಇಷ್ಟಪಡದವರು ಹಾಗೆ ತಿನ್ನಬಹುದು).
ಈ ಸಾಸಿವೆಯನ್ನು ಅನ್ನ, ದೊಸೆ, ರೊಟ್ಟಿ ಜೊತೆ ತಿನ್ನಬಹುದು. ಓಮ್ಮೆ ಮನೆಯಲ್ಲ್ಲಿ ನೀವು ಮಾಡಿ, ಹೇಗೆ ಆಯಿತು ಅಂತ ನಂಗೂ ಹೇಳಿ :)