ಪಾಲಕ್ ಚಪಾತಿ / Palak Chapati




ಬೇಕಾಗುವ ಸಾಮಗ್ರಿಗಳು

ಗೋದಿಹಿಟ್ಟು 1 ಕಪ್
ಪಾಲಕ್ 1 ಕಟ್ಟು
೪-೬ ಹಸಿಮೆಣಸಿನಕಾಯಿ
೨ ಟೀಸ್ಪೂನ್ ಜೀರಿಗೆ
ಕೊತ್ತಂಬರಿಸೊಪ್ಪು ಸ್ವಲ್ಪ
1 ಟೀಸ್ಪೂನ್ ಅರಿಸಿನ
ಸ್ವಲ್ಪ ಇಂಗು
ಸ್ವಲ್ಪ ಎಣ್ಣೆ

ಮಾಡುವ ವಿಧಾನ

ಮೊದಲು ಹಸಿಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿಸೊಪ್ಪು,ಅರಿಸಿನ, ಇಂಗು ಇವುಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ನಂತರ ಚೆನ್ನಾಗಿ ತೊಳೆದ ಪಾಲಕನ್ನು ಸಣ್ಣಗೆ ಹೆಚ್ಚಿ 1 ಟೀಸ್ಪೂನ್ ಎಣ್ಣೆ ಹಾಕಿ ಸ್ವಲ್ಪ ಹುರಿಯಿರಿ. ಆಮೇಲೆ ಗೋದಿಹಿಟ್ಟು, ರುಬ್ಬಿಟ್ಟಿರುವ ಮಸಾಲೆ, ಉಪ್ಪು, ಹುರಿದುಕೊಂಡಿರೋ ಪಾಲಕ್ ಎಲ್ಲ ಸೇರಿಸಿ ಚನ್ನಾಗಿ ನಾದಿ ಚಪತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಚಪಾತಿ ಲಟ್ಟಿಸಿ ಬೇಯಿಸಿದರೆ ಪಾಲಕ್ ಚಪಾತಿ ರೆಡಿ.

ಉದ್ದಿನಬೇಳೆ ಮಸಾಲ / Urid Dal Masala




ಬೇಕಾಗುವ ಸಾಮಗ್ರಿಗಳು

1 ಕಪ್ ಉದ್ದಿನಬೇಳೆ (1 ಘಂಟೆ ನೆನೆಸಿ ಚನ್ನಾಗಿ ತೊಳೆದುಕೊಳ್ಳಬೇಕು)
2 ಈರುಳ್ಳೀ
1 ಟೊಮ್ಯಾಟೊ
1 ಇಂಚು ಶುಂಠಿ
4-5 ಬೆಳ್ಳುಳ್ಳಿ ಹಿಲ್ಕು
2 ಹಸಿ ಮೆಣಸಿನಕಾಯಿ
1 ಟೀಸ್ಪೂನ್ ಕಾರದ ಪುಡಿ
1 ಟೀಸ್ಪೂನ್ ಗರಮ್ ಮಸಾಲೆ / ಚೋಲೆ ಮಸಾಲೆ
2 ಟೀಸ್ಪೂನ್ ಅರಿಸಿನದಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಬೆಲ್ಲ

ಮಾಡುವ ವಿಧಾನ

ಮೊದಲು ಒಂದು ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ತೊಳೆದ ಉದ್ದಿನಬೇಳೆ ಮತ್ತೆ ಅರಿಸಿನದಪುಡಿ ಹಾಕಿ ಸ್ವಲ್ಪ ಫ್ರೈ ಮಾಡ್ಕೊಬೇಕು, ಅದು ಸ್ವಲ್ಪ ಫ್ರೈ ಅದಮೇಲೆ ಅದಕ್ಕೆ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಬೇಕು .ಉದ್ದಿನಬೇಳೆ ಬೇಯೋ ಹೊತ್ತಿಗೆ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಹೆಚ್ಚಿದ ಈರುಳ್ಳೀ,ಬೆಳ್ಳುಳ್ಳಿ,ಹಸಿ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಶುಂಠಿ ಹಾಕಿ ಹೊಂಬಣ್ಣ ಬರುವತನಕ ಹುರಿಬೇಕು ನಂತರ ಅದಕ್ಕೆ ಟೊಮ್ಯಾಟೊ ಮತ್ತೆ ಮಿಕ್ಕ ಮಸಾಲೆ ಹಾಕಿ ಸ್ವಲ್ಪ ಹೊತ್ತು ಫ್ರೈ ಮಡಿ ಇವಾಗ ಮಸಾಲೆ ರೆಡಿ ಆಗಿದೆ, ರೆಡಿ ಆಗಿರೋ ಮಸಾಲೆಗೆ ಬೆಂದ ಉದ್ದಿನಬೇಳೆ ಹಾಕಿದರೆ ಉದ್ದಿನಬೇಳೆ ಮಸಾಲ ರೆಡಿ.

ಹುಳಿಪುಡಿ / Sambar Masala Powder

ಬೇಕಾಗುವ ಸಾಮಗ್ರಿಗಳು

¼ ಕೇಜಿ ಕೊತ್ತಂಬರಿಬೀಜ
¼ ಕೇಜಿ ಬ್ಯಾಡಗಿಮೆಣಸಿನಕಾಯಿ
25 ಗ್ರಾಂ ಜೀರಿಗೆ
1 ಜಾಯಿಕಾಯಿ
25-50 ಗ್ರಾಂ ಚಕ್ಕೆ
6 ಏಲಕ್ಕಿ
200 ಗ್ರಾಂ ಕಡಲೆಬೇಳೆ
50 ಗ್ರಾಂ ಉದ್ದಿನಬೇಳೆ
ಸ್ವಲ್ಪ ಇಂಗು
ಮೆಂತ್ಯ 1 ಟೀಸ್ಪೂನ್

ಮಾಡುವ ವಿಧಾನ

ಮೇಲೆ ಹೇಳಿರುವ ಸಾಮಾನುಗಳನ್ನು ಒಂದೊಂದಾಗಿ ಹುರಿದು ಅದನ್ನು ಚನ್ನಾಗಿ ಪುಡಿ ಮಾಡಿದರೆ ಹುಳಿಪುಡಿ ರೆಡಿ.