ಪಲಾವ್ / Veg Pulao

ಬೇಕಾಗಿರುವ ಸಾಮಾನುಗಳು:
1 ಕಪ್ ಬಾಸ್ಮತಿ ಅಕ್ಕಿ (ಚನ್ನಾಗಿ ತೊಳೆದುಕೊಳ್ಳಿ)
3tbs ತುಪ್ಪ/ಎಣ್ಣೆ
ಬಟಾಣಿ, ಆಲುಗಡ್ಡೆ, ಕ್ಯಾರೆಟ್, ಹೂವುಕೋಸು,
ಈರುಳ್ಳಿ 2. (ಅದರಲ್ಲಿ ಒಂದು fry ಮಾಡಿಕೊಳ್ಳುವುದಕ್ಕೆ, ಮತ್ತೊಂದು ಮಸಾಲೆಗೆ).

ಮಸಾಲೆಗೆ ಮಾಡುವ ವಿಧಾನ: ಈರುಳ್ಳಿ ದೊಡ್ದದು1, ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 tbs, ಹಸಿಮೆಣಸಿನಕಾಯಿ 3, ಕೊತ್ತಂಬರಿಸೊಪ್ಪು1 ಸಣ್ಣಕಟ್ಟು, ಪುದಿನ 1 ಸಣ್ಣಕಟ್ಟು, ಚಕ್ಕೆ 2ಇಂಚು, ಲವಂಗ 4, ದಾಲ್ಚಿನಿ ಎಲೆ (ಪಲಾವ್ ಎಲೆ) 1, ಗಸಗಸೆ 2tbs, ಕಲ್ಲುಹೂವು ಸ್ವಲ್ಪ, ತೆಂಗಿನಕಾಯಿ ಸ್ವಲ್ಪ. ಈ ಎಲ್ಲವನ್ನು ಸೇರಿಸಿ ರುಬ್ಬಿಕೊಳ್ಳಬೇಕು.

ಮಾಡುವ ವಿಧಾನಮೊದಲು ಕುಕ್ಕರಿಗೆ 3tbs ತುಪ್ಪ ಹಾಕಿ, ಅದು ಸ್ವಲ್ಪ ಕಾದ ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಫ಼್ರೈ ಮಾಡಿ. ನಂತರ ಅದಕ್ಕೆ ಹೆಚ್ಚಿಟ್ಟಿರುವ ತರಕಾರಿಗಳನ್ನು ಹಾಕಿ ಮತ್ತೆ ಸ್ವಲ್ಪ ಫ಼್ರೈ ಮಾಡಿ. ಇವಾಗ ಇದಕ್ಕೆ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಹಸಿ ವಾಸನೆ ಹೋಗುವವರೆಗು ಹುರಿಯಿರಿ. ನಂತರ ತೊಳೆದ ಅಕ್ಕಿಯನ್ನು ಹಾಕಿ ಸ್ವಲ್ಪ ಹುರಿಯಿರಿ. ಇದಕ್ಕೆ 2 ಕಪ್ ನೀರನ್ನು ಹಾಕಿ ಕುಕ್ಕರಿನ ಮುಚ್ಚಳ ಮುಚ್ಚಿ 2 ವಿಸಲ್ ಬಂದ ನಂತರ ಕೆಳಗೆ ಇಳಿಸಿದರೆ ಪಲಾವ್ ರೆಡಿ.

0 comments: