ಮೆಂತ್ಯ ಥೇಪ್ಲ / Menthya Thepla / Methi Thepla
೨-೩ ದಿನಗಳ ಕಾಲ ಹಾಳಾಗದೆ ಇರುವ ಅದ್ಭುತ ರುಚಿಯ
ಗುಜರಾತಿ ತಿಂಡಿ.
ಬೇಕಾಗಿರುವ ಸಾಮಾನುಗಳು
1 ಕಪ್ ಗೋದಿಹಿಟ್ಟು
1 ಕಪ್ ಸಜ್ಜೆ ಹಿಟ್ಟು(ಮಿಲೆಟ್ ಫ಼್ಲೊರ್)
1 ಕಟ್ಟು ಬಿಡಿಸಿ ತೊಳೆದ ಮೆಂತ್ಯ ಸೊಪ್ಪು
1/2 ಕಪ್ ಮೊಸರು
3 ಸಣ್ಣಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ
1 ಚಮಚ ಅರಿಸಿನ
1 ಚಮಚ ಅಚ್ಚಮೆಣಸಿನಪುಡಿ
1 ಚಮಚ ಶುಂಟಿ-ಬೆಳ್ಳುಳ್ಳಿ ಪೇಸ್ಟ್
1 ಚಮಚ ಜೀರಿಗೆ
1 ಚಮಚ ಅಜ್ವಾನ
2 ಚಮಚ ಬಿಳಿ ಎಳ್ಳು
1 ಚಿಟಿಕೆ ಇಂಗು
1 ಚಮಚ ಸಕ್ಕರೆ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ ಬೇಯಿಸಲು
ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಸ್ವಲ್ಪ ನೀರಿನೊಂದಿಗೆ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ಚನ್ನಾಗಿ ನಾದಿ, ಅರ್ದ ಗಂಟೆ ನೆನೆಯಲು ಬಿಡಿ. ನಂತರ ಚಪಾತಿಗಿಂತ ಸ್ವಲ್ಪ ತೆಳ್ಳಗೆ ಲಟ್ಟಿಸಿ, ಕಾವಲಿಯ ಮೇಲೆ ತುಂಬ ಎಣ್ಣೆ ಹಾಕಿ ಬೇಯಿಸಿದರೆ (shallow fry) ಥೇಪ್ಲ ರೆಡಿಯಾಗುತ್ತದೆ. ಎಣ್ಣೆ ತಿನ್ನಲು ಇಷ್ಟಪಡದವರು ಚಪಾತಿಯಂತೆ ಬೇಯಿಸಿಕೊಳ್ಳಬಹುದು.
ಥೇಪ್ಲಾವನ್ನು ಮೊಸರು, ಬೆಳ್ಳುಳ್ಳಿಚಟ್ನಿ, ನಿಂಬೆಕಾಯಿ ಉಪ್ಪಿನಕಾಯಿ ಜೊತೆ ತಿನ್ನಬಹುದು. ಅದೆನು ಇಲ್ಲದಿದ್ದರೆ ಹಾಗೆಯೆ ತಿನ್ನಬಹುದು.
ಥೆಪ್ಲವನ್ನು ಹಲವಾರು ಬಗೆಯಲ್ಲಿ ತಯಾರಿಸಬಹುದು. ಸಜ್ಜೆ ಹಿಟ್ಟು ಸಿಗದೆ ಇದ್ದಲ್ಲಿ ೨ ಕಪ್ ಗೋದಿಹಿಟ್ಟಿಗೆ ೨ ಚಮಚ ಸಣ್ಣ ರವೆ, ೧ ಚಮಚ ಕಡ್ಲೆಹಿಟ್ಟು ಸೇರಿಸಿಕೊಂಡು ಮಾಡಬಹುದು.

10:31 AM
|
Labels:
Tawa Specials
|
You can leave a response
Subscribe to:
Post Comments (Atom)
0 comments:
Post a Comment