ಅವಲಕ್ಕಿ ಬಿಸಿಬೇಳೆ ಬಾತ್ / Avalakki Bisi Bele Bath

ಬೇಕಾಗಿರುವ ಸಾಮಾನುಗಳು:

2 ಕಪ್ ಅವಲಕ್ಕಿ
1 ಕಪ್ ತೊಗರಿ ಬೇಳೆ,
1/4 ಕಪ್ ತೆಂಗಿನಕಾಯಿ ತುರಿ
½ spoon ಅಚ್ಚಕಾರದ ಪುಡಿ3 table spoon ಹುಣಿಸೆಹಣ್ಣಿನ ರಸ, ಸ್ವಲ್ಪ ಬೆಲ್ಲ, 2 table spoon ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು., ಇನ್ನು ಒಗ್ಗರಣೆಗೆ ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ.

ಒಂದಿಷ್ಟು ಹೆಚ್ಚಿರುವ ತರಕಾರಿಗಳು ( ಎನೇನ್ ತರಕಾರಿ ಹಾಕ್ಕೊಳ್ತಿರೊ ಅದು ನಿಮಿಗೆ ಬಿಟ್ಟಿದ್ದು)ಆಲೂಗಡ್ಡೆ, ಬೀನ್ಸ್, ಉಳ್ಳಾಗಡ್ಡಿ, ಕ್ಯಾರೆಟ್, ಟಮಾಟಿ, ಬಟಾಣಿ ಕಾಳು, ಶೇಂಗಾಬೀಜ, ಎಲ್ಲಾ ಸೇರಿ 2 ಕಪ್ ಸಾಕು ಅನ್ಸತ್ತೆ. ನಿಮಿಗೆ ತರಕಾರಿ ಜಾಸ್ತಿ ಬೇಕು ಅಂದ್ರೆ 3 ಕಪ್ ಹಾಕ್ಕೊಳ್ಳಿ.

ಮಾಡುವ ಬಗೆ:-

ತರಕಾರಿ ಮತ್ತು ತೊಗರಿಬೇಳೆಗಳನ್ನು ಬೇಯಿಸಿಕೊಳ್ಳಿ, ಅದು ಬೇಯುತ್ತಿರುವಾಗ ತುರಿದಿಟ್ಟ ತೆಂಗಿನಕಾಯಿ, 3 TS ಬಿಸಿಬೇಳೆಬಾತ್ಪುಡಿ, ಉಪ್ಪು, 1/4 ಚಮಚ ಅಚ್ಚಕಾರದ ಪುಡಿ, ಬೆಲ್ಲ, ಮತ್ತು ಹುಣಿಸೆಹಣ್ಣಿನ ರಸವನ್ನು ಒಟ್ಟಿಗೆ ಸೇರಿಸಿಕೊಂಡು ರುಬ್ಬಿಕೊಳ್ಳಿ.

ಇದನ್ನ ಮಾಡೋಸ್ಟ್ರಲ್ಲಿ, ತರಕಾರಿ ಮತ್ತೆ ಬೇಳೆ ಬೆಂದಿರತ್ತೆ. ಅದನ್ನ ಒಲೆ ಮೇಲಿಂದ ಇಳ್ಸ್ಕೊಳಿ.
ಒಂದು ಗಟ್ಟಿ ತಳದ ಪಾತ್ರೆನ ತೊಗೊಂಡ್ರೆ ಬಿಸಿಬೇಳೆಬಾತ್ ತಳ ಹೊತ್ತಿಸದೇ ಮಾಡೊಕೆ ಸುಲಭ ಆಗತ್ತೆ. ಇದು ಕೇವಲ ನನ್ನಅಭಿಪ್ರಾಯ.

ಪಾತ್ರೆಗೆ ತುಪ್ಪ ಹಾಕಿಕೊಂಡು ಒಗ್ಗರಣೆ ಮಾಡ್ಕೊಳಿ, ಅದಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ fry ಮಾಡಿ. ಇವಾಗ ಇದಕ್ಕೆಬೆಂದಿರುವ ತರಕಾರಿ ಮತ್ತು ಬೇಳೆಗಳನ್ನ ಹಾಕಿ. ಅದನ್ನ ಸ್ವಲ್ಪ ಹೊತ್ತು ಹಾಗೆ ಕುದಿಯಲು ಬಿಡಿ, ಅದು ಕುದಿಯುತ್ತಿರುವಾಗಆವಲಕ್ಕಿಯನ್ನು ಚನ್ನಾಗಿ ತೊಳ್ಕೊಳಿ. ಇಶ್ಟ್ ಹೊತ್ತಿಗೆ ನೀವು ಒಲೆಯ ಮೇಲೆ ಇಟ್ಟಿರೋದು ಕುದಿಯುತ್ತಿರುತ್ತೆ. ಅದಕ್ಕೆ ತೊಳೆದಅವಲಕ್ಕಿಯನ್ನು ಹಾಕಿ. 2 ನಿಮಿಷ ಬಿಡಿ, ನಿಮ್ಮ ಅವಲಕ್ಕಿ ಬಿಸಿಬೇಳೆಬಾತ್ ರೆಡಿ ಆಗಿರತ್ತೆ

Recipe by Aditya Nadig

1 comments:

Unknown said...

very informative