ಕಾಜು ಕ್ಯಾರೆಟ್ Delight / Kaju Carrot Delight / Cashew Carrot Delight
ಬೇಕಾಗಿರುವ ಸಾಮಾನುಗಳು:
1 ಕ್ಯಾರೆಟ್
50 gms ಗೋಡಂಬಿ (ಸ್ವಲ್ಪಹೊತ್ತು ಹಾಲಿನಲ್ಲಿ ನೆನೆಸಿ, ಪೇಸ್ಟ್ ಮಾಡಿಕೊಳ್ಳಬೇಕು)
2 ಕಪ್ ಹಾಲು
50gms ಸಕ್ಕರೆ (ಸಿಹಿ ಜಾಸ್ತಿ ಬೇಕು ಅಂದ್ರೆ 100 gms ಸಕ್ಕರೆ ಹಾಕಿಕೊಳ್ಳಬಹುದು)
ತುಪ್ಪ 1 tea spoon
ಮೊದಲು ಕ್ಯಾರೆಟ್ ಹುರಿದುಕೊಳ್ಳಬೇಕು (ಹಸಿ ವಾಸನೆ ಹೋಗೋತನಕ). ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಕಾಯಿಸಬೇಕು (2 ಕಪ್ ಹಾಲು 1 ಕಪ್ ಆಗೋತನಕ ಕಾಯಿಸಬೇಕು). ನಂತರ ಸಕ್ಕರಯನ್ನು ಹಾಕಿ ಕೈಯಾಡುತ್ತಿರಬೇಕು, ಸಕ್ಕರೆ ಕರಗಿದ ನಂತರ ಗೋಡಂಬಿ ಪೇಸ್ಟ್ ಮತ್ತು ಹುರಿದಿಟ್ಟ ಕ್ಯಾರೆಟ್ ಹಾಕಿ ೩ ನಿಮಿಷ ಸಣ್ಣ ಉರಿಯಲ್ಲಿ ಕುದಿಸಬೇಕು.
ಸ್ವಲ್ಪ ಹೊತ್ತು fridgeನಲ್ಲಿ ಇಟ್ಟರೆ ಇನ್ನೂ ಒಳ್ಳೆ ರುಚಿ ಸಿಗತ್ತೆ.
ನೆನಪಿರಲಿ ಇದು ತಳ ಹೊತ್ತುವ ಸಾಧ್ಯತೆಗಳು ಜಾಸ್ತಿ ಇರುವುದರಿಂದ ಕೈಯಾಡುತ್ತಿರಲೇಬೇಕು.
6:43 AM
|
Labels:
Sweets
|
You can leave a response
Subscribe to:
Post Comments (Atom)
2 comments:
yaaakoooo comment bandilvala....cashew delight sevane maadirorinda....Consumer feedback ilde naavu try maadallappa :P
2 sala madidru idanna namma maneli, 2 salanu chanage agittu, BTW, ivaga idanna chapati jote tindre hengiratte anta nodtidini :)
Post a Comment